ಕಟ್ಟಿನ ಸಾರು ಉತ್ತರ ಕರ್ನಾಟಕದಲ್ಲಿ ಮಾಡುವ ಪದ್ಧತಿ

ಕಟ್ಟಿನ ಸಾರು
ಉತ್ತರ ಕರ್ನಾಟಕದಲ್ಲಿ ಮಾಡುವ ಪದ್ಧತಿ

ಮಾಡುವ ವಿಧಾನ:
ಹೋಳಿಗೆ ಮಾಡುವಾಗ ಕಡ್ಲೆಬೇಳೆ ಬೇಯಿಸಿದಾಗ ಬೇಳೆಯಲ್ಲಿ ಉಳಿದಿರು ಕಟ್ಟನ್ನು ಬಸಿದು ತೆಗೆಯಿರಿ.


ಬೇಯಿಸಿದ ಕಡಲೆಬೇಳೆ 1 ಟೇಬಲ್ ಚಮಚದಷ್ಟು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ1 ಕಪ್  ಬೇಳೆಯ ಕಟ್ಟಿನಲ್ಲಿ ಹಾಕಿ ಮಿಕ್ಸ್ ಮಾಡಿ ಇಡಿ.

ಒಂದು ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣುನ್ನು ನೆನೆಯಲು ಇಡಿ.

  ಒಂದು ಬಾಣಲೆಯಲ್ಲಿ 1 ಟೇಬಲ್ ಚಮಚ ಎಣ್ಣೆ ಹಾಕಿ  1ಮಾಧ್ಯಮ ಗಾತ್ರದ ಈರುಳ್ಳಿಯನ್ನು ಉದ್ದುದ್ದು ಆಗಿ ಕಟ್ ಮಾಡಿ ಹಾಕಿ ಕಂದು ಬಣ್ಣಬರುವರೆಗೂ ಹುರಿದುಕೊಳ್ಳಿ.ಈಗ ಈರುಳ್ಳಿಯನ್ನು ತೆಗೆದು ಇಡಿ.

ಅದೇ ಬಾಣಲೆಯಲ್ಲಿ  ಕೊಬ್ಬರಿ ಚೂರುಗಳನ್ನು ಅದರಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

ಈಗ ಈರುಳ್ಳಿ ಮತ್ತು ಕೊಬ್ಬರಿ ಚೂರುಗಳನ್ನು  ಜಜ್ಜಿಕೊಳ್ಳಿ.ಬೇಕಾದ್ರೆ ಮಿಕ್ಸಿಯಲ್ಲಿ ಕೂಡ ಹಾಕಿ 2 ರೌಂಡ್ ಮಾಡಿಸಿ ಆದ್ರೆ ಪೇಸ್ಟ್ ರುಬ್ಬಕೂ ಬೇಡಿ.

7-8 ಎಸಳು ಬೆಳ್ಳುಳ್ಳಿ ಜಜ್ಜಿ ಕೊಳ್ಳಿ.

ಒಂದು ಪಾತ್ರೆಯಲ್ಲಿ2 ಟೇಬಲ್ ಸ್ಫೂನ್ ಎಣ್ಣೆ ಹಾಕಿ ಕಾಯಲು ಇಡಿ.ಎಣ್ಣೆ ಕಾದ ನಂತರ ಸಾಸಿವೆ ಹಾಕಿ .ಈಗ ಕರಿಬೇವು , ಜಜ್ಜಿದ ಬೆಳ್ಳುಳ್ಳಿ ಹಾಕಿ  ತಯಾರಿಸಿದ ಈರುಳ್ಳಿ ಮತ್ತು ಕೊಬ್ಬರಿ ಮಿಶ್ರಣವನ್ನು ಹಾಕಿ 2 ನಿಮಿಷಗಳ ವರೆಗೆ ಫ್ರಾಯ ಮಾಡಿ .ಈಗ1 ಟೇಬಲ್ ಚಮಚ ಗರಂ ಮಸಾಲಾ, ರುಚಿಗೆ ತಕ್ಕಷ್ಟು ಖಾರದ ಪುಡಿ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ನಿಮಿಷ ಬಿಸಿ ಮಾಡಿ ಬೇಳೆಯ ಕಟ್ಟನ್ನು ಹಾಕಿ 3-4 ಕಪ್ ನೀರು ಹಾಕಿ ನೆನೆಸಿದ ಹುಣಸೆಹಣ್ಣಿನ ರಸ ಮತ್ತು ಸ್ವಲ್ಪ ಬೆಲ್ಲ ಹಾಕಿ 7-8  ನಿಮಿಷಗಳ ವರೆಗೆ ಕುದಿಯಲು ಇಡಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.

Comments

Popular posts from this blog

ಚಿತ್ತಾ ಜಿನೇಂದ್ರ ರವರ ಕಲಾಕೃತಿ ಎಂದರೆ ಪರಂಪರೆ ಮತ್ತು ಸಮಕಾಲಿನತೆಗಳ ಮುಖಾ ಮುಖಿ 

"ಜಿನೇಂದ್ರ ಎಂ. ಎಂ".ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಹಿನ್ನೋಟ