"ಜಿನೇಂದ್ರ ಎಂ. ಎಂ".ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಹಿನ್ನೋಟ
ಸ್ನೇಹಿತರೇ,. ಪ್ರಕೃತಿ ಚಿತ್ರ.ಸಮಕಾಲೀನ ಕಲಾಕೃತಿ ರೇಖಾಚಿತ್ರ. ಶಿಲ್ಪ ಕಲಾಕೃತಿ. ಮ್ಯೂರಲ್ ಗಳು. ಸೆಟ್ ವರ್ಕಗಳು ಕಲಾಕ್ಷೇತ್ರದ ಎಲ್ಲಾ ಆಯಮಗಳಲ್ಲೂ ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುವ " ಜಿನೇಂದ್ರ ಎಂ. ಎಂ" ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಒಂದು ಸಣ್ಣ ಪರಿಚಯ.. 2004-2005ರಲ್ಲಿ ಕಲಾ ಅಭ್ಯಾಸಕ್ಕಾಗಿ ಶಿವಮೊಗ್ಗಕ್ಕೆ ಬಂದ ಜಿನೇಂದ್ರವರು ನಿಧಾನವಾಗಿ ಕಲಾಕೃತಿಯ ರಚನೆಯಲ್ಲಿ ತೊಡಗಿಕೊಂಡರು. ಅಂದಿನಿಂದ ಇಂದಿನವರೆಗೂ ಹಲವಾರು ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ. ಹಾಗೂ ರಚಿಸುತ್ತಲೇ ಇದ್ದಾರೆ.. ಆರಂಭದ ದಿನಗಳಲ್ಲಿ ಪ್ರಕೃತಿ ಚಿತ್ರಗಳತ್ತ ವಾಲಿದ ಅವರು ಶಿವಮೊಗ್ಗದ ಖ್ಯಾತ ಚಿತ್ರಕಲಾವಿಧ S.R ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ಹಲವಾರು ಪ್ರಕೃತಿ ಚಿತ್ರಗಳನ್ನು ರಚಿಸಿ ಅವರದ್ದೇ ಆದ ಶೈಲಿಯನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿ ಆದರೂ!. ಮುಂದಿನ ದಿನದಲ್ಲಿ ಅ...